`ಭಲೇಜೋಡಿ` ನಾಳೆಯಿಂದ ತೆರೆಗೆ
Posted date: 18 Thu, Feb 2016 – 01:52:52 PM

 ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರಬಾಬು ಅವರು ನಿರ್ಮಿಸಿರುವ ‘ಭಲೇಜೋಡಿ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ಸಾಧುಕೋಕಿಲ ನಿರ್ದೇಶನದ ಈ ಚಿತ್ರದ ನಾಯಕರಾಗಿ ಸುಮಂತ್ ಶೈಲೇಂದ್ರ ಅಭಿನಯಿಸಿದ್ದಾರೆ. ಶಾನ್ವಿ ಶ್ರೀವಾಸ್ತವ್, ಹರಿಪ್ರಿಯ, ಹರ್ಷಿಕಾ ಪೂಣಚ್ಚ, ಸುಮಲತ, ಸಾಧುಕೋಕಿಲ, ರವಿಶಂಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಜೈಆನಂದ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಾಧುಕೋಕಿಲ ಸಂಗೀತ ನೀಡಿದ್ದಾರೆ. ಜೋ.ನಿ.ಹರ್ಷ ಸಂಕಲನ ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಇಸ್ಮಾಯಿಲ್ ಅವರ ಕಲಾ ನಿರ್ದೇಶನ ‘ಭಲೇಜೋಡಿ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed